Ballari, Aug. 12: The birth anniversary of Dr. Vikram Sarabhai, the father of the Indian space program, was celebrated at Rashtrotthana Vidya Kendra – Ballari.
- Principal Smt. Saraswati informed the students about the life, achievements and invaluable contributions of Dr. Vikram Sarabhai to the Indian space research field.
- Pratiksha, a student of class 8, gave a speech on Dr. Vikram Sarabhai and explained his role in the establishment of the Indian Space Research Organisation (ISRO), his contribution to the field of science and the Padma Bhushan and Padma Vibhushan awards bestowed upon him.
ಬಳ್ಳಾರಿ, ಆ. 12: ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯ್ ಅವರ ಜಯಂತಿಯನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಆಚರಿಸಲಾಯಿತು.
- ಪ್ರಧಾನಾಚಾರ್ಯರಾದ ಶ್ರೀಮತಿ ಸರಸ್ವತಿ ಅವರು ಡಾ. ವಿಕ್ರಮ್ ಸಾರಾಭಾಯ್ ಅವರ ಜೀವನ, ಸಾಧನೆಗಳು ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
- 8ನೇ ತರಗತಿಯ ವಿದ್ಯಾರ್ಥಿನಿ ಪ್ರತಿಕ್ಷ ಡಾ. ವಿಕ್ರಮ್ ಸಾರಾಭಾಯ್ ಅವರ ಕುರಿತು ಭಾಷಣ ಮಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸ್ಥಾಪನೆಯಲ್ಲಿ ಅವರ ಪಾತ್ರ, ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಅವರಿಗೆ ಸಂದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳ ಕುರಿತು ವಿವರಿಸಿದರು.


