Mar. 18: Yugadi festival was celebrated in Rashtrotthana Vidya Kendra – Ballari. Student Nayana Priya spoke about the speciality of Yugadi festival and explained that Yugadi is an important festival of our culture and a symbol of new beginnings. Later, the school principal, Smt. Swaraswati spoke and said that Yugadi is a new year for all of us, a festival that gives new desires, new dreams and new goals. At the end of the program, the festival greetings were conveyed through the lines “Yugadi is back, it has brought the beginning of the new year, may it show the way to the new year, may it give a solid foundation to the lives of all of us”.

ಮಾ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿ ಶಾಲೆಯಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿನಿ ನಯನ ಪ್ರಿಯಾ ಅವರು ಯುಗಾದಿ ಹಬ್ಬದ ವಿಶೇಷತೆಯ ಕುರಿತು ಮಾತನಾಡಿ, ಯುಗಾದಿ ನಮ್ಮ ಸಂಸ್ಕೃತಿಯ ಮಹತ್ವದ ಹಬ್ಬವಾಗಿದ್ದು, ಹೊಸ ಆರಂಭಗಳ ಸಂಕೇತವಾಗಿದೆ ಎಂದು ವಿವರಿಸಿದರು. ನಂತರ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಸ್ವರಸ್ವತಿಯವರು ಮಾತನಾಡಿ ಯುಗಾದಿ ನಮ್ಮೆಲ್ಲರಿಗೂ ಹೊಸ ವರ್ಷವಾಗಿದ್ದು, ಹೊಸ ಆಸೆಗಳು, ಹೊಸ ಕನಸುಗಳು ಮತ್ತು ಹೊಸ ಗುರಿಗಳನ್ನು ನೀಡುವ ಹಬ್ಬವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ “ಮರಳಿ ಬಂದಿದೆ ಯುಗಾದಿ, ತಂದಿದೆ ಹೊಸ ವರುಷದ ಆದಿ, ತೋರಲಿ ಹೊಸ ವರುಷಕ್ಕೆ ಹಾದಿ, ನೀಡಲಿ ನಮ್ಮೆಲ್ಲರ ಬಾಳಿಗೂ ಭದ್ರ ಬುನಾದಿ” ಎನ್ನುವ ಸಾಲುಗಳ ಮೂಲಕ ಹಬ್ಬದ ಶುಭಾಶಯಗಳನ್ನು ತಿಳಿಸಲಾಯಿತು:

Leave a Reply

Your email address will not be published. Required fields are marked *