Ballari, Sept. 25: A special program was organized organised as part of the 150th anniversary of the song ‘Vande Mataram’ at Rashtrotthana Vidya Kendra – Ballari, in which students, parents, teachers and dignitaries participated.
- Sri Jagadish Sillin, President of the program, Baellariy Zilla Saha Karyakavaha (RSS), Ballari, spoke and spoke about the importance of national unity, patriotism and our rich cultural heritage.
- On the same occasion, Class 4 student Chirantan Gowda spoke about Pandit Deendayal Upadhyaya’s Jayanti and gave a brief account of his life, ideals and thoughts of on national service.
- Then Principal Smt. Saraswati and distinguished guests hoisted the flag.
- Everyone respectfully sang the national anthem and paid tribute to the honour of the nation.
- Then the students, parents, teachers and dignitaries of the school came together and collectively sang the song ‘Vande Mataram’.
- Kannada teacher Smt. Veena spoke about the specialness and importance of ‘Vande Mataram’ song.
ಬಳ್ಳಾರಿ, ಸೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ‘ವಂದೇ ಮಾತರಂ’ ಗೀತೆಯ 150 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಗಣ್ಯರು ಭಾಗವಹಿಸಿದರು.
- ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಜಗದೀಶ್ ಸಿಲ್ಲಿನ್, ಬಳ್ಳಾರಿ ಜಿಲ್ಲಾ ಸಹ ಕಾರ್ಯವಾಹ (RSS), ಬಳ್ಳಾರಿ ಅವರು ಮಾತನಾಡಿ, ರಾಷ್ಟ್ರದ ಏಕತೆ, ದೇಶಾಭಿಮಾನ ಹಾಗೂ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ತಿಳಿಸಿದರು.
- ಇದೇ ಸಂದರ್ಭದಲ್ಲಿ 4ನೇ ತರಗತಿಯ ವಿದ್ಯಾರ್ಥಿ ಚಿರಂತನ್ ಗೌಡ ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಜಯಂತಿಯ ಕುರಿತು ಮಾತನಾಡಿ, ಅವರ ಜೀವನ, ಆದರ್ಶಗಳು ಹಾಗೂ ದೇಶಸೇವೆಯ ಚಿಂತನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದನು.
- ನಂತರ ಪ್ರಾಂಶುಪಾಲರಾದ ಶ್ರೀಮತಿ ಸರಸ್ವತಿ ಹಾಗೂ ಗಣ್ಯ ಅತಿಥಿಗಳು ಧ್ವಜಾರೋಹಣ ನೆರವೇರಿಸಿದರು.
- ಎಲ್ಲರೂ ಗೌರವಪೂರ್ವಕವಾಗಿ ರಾಷ್ಟ್ರಗೀತೆಯನ್ನು ಹಾಡಿ ರಾಷ್ಟ್ರದ ಗೌರವಕ್ಕೆ ವಂದನೆ ಸಲ್ಲಿಸಿದರು.
- ತದನಂತರ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಗಣ್ಯರು ಒಗ್ಗೂಡಿ ಸಾಮೂಹಿಕವಾಗಿ ‘ವಂದೇ ಮಾತರಂ’ ಗೀತೆಯನ್ನು ಹಾಡಿದರು.
- ‘ವಂದೇ ಮಾತರಂ’ ಗೀತೆಯ ವಿಶೇಷತೆ ಹಾಗೂ ಮಹತ್ವದ ಕುರಿತು ಕನ್ನಡ ಶಿಕ್ಷಕಿ ಶ್ರೀಮತಿ ವೀಣಾ ಅವರು ಮಾತನಾಡಿದರು.





