Ballari, June 20: International Yoga Day was celebrated herein Rashtrotthana Vidya Kendra – Ballari. The Chief Guests of the program were Sri Pampapati, District Co-Director of Karnataka Rajya Patanjali Yoga Peeth and Patanjali Samiti, Ballari members and Sri Virupaksha. The students spoke about the importance of Yoga Day and said that Yoga helps in physical health as well as mental peace, concentration and self-development. In the Yoga Sankalpa taken under the leadership of Smt. Sreeja, everyone took the resolution to practice Yoga every day. Under the guidance of Yoga teacher Sri Veeresh, various Yogasanas and Pranayams were demonstrated as per the protocol of International Yoga Day. The chief guests spoke about the importance of Yoga, its place in Indian culture and its necessity in a healthy life. He said that yoga is not only helpful for physical health but also for mental and spiritual development. The chief guests were felicitated and honoured by the school.

ಬಳ್ಳಾರಿ, ಜೂ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಪಂಪಾಪತಿ, ಕರ್ನಾಟಕ ರಾಜ್ಯ ಪತಂಜಲಿ ಯೋಗ ಪೀಠದ ಜಿಲ್ಲಾ ಸಹ ಸಂಚಾಲಕರು ಹಾಗೂ ಪತಂಜಲಿ ಸಮಿತಿ, ಬಳ್ಳಾರಿ ಸದಸ್ಯರು ಮತ್ತು ಶ್ರೀ ವಿರೂಪಾಕ್ಷ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಯೋಗ ದಿನದ ಮಹತ್ವ ಕುರಿತು ಮಾತನಾಡಿ, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಹಾಗೂ ಆತ್ಮವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಶ್ರೀಮತಿ ಶ್ರೀಜಾ ಅವರ ನೇತೃತ್ವದಲ್ಲಿ ಸ್ವೀಕರಿಸಿದ ಯೋಗ ಸಂಕಲ್ಪದಲ್ಲಿ ಎಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಸಂಕಲ್ಪವನ್ನು ಕೈಗೊಂಡರು. ಯೋಗ ಶಿಕ್ಷಕರಾದ ಶ್ರೀ ವೀರೇಶ್ ಅವರ ಮಾರ್ಗದರ್ಶನದಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಪ್ರೋಟೋಕಾಲ್ ಅನುಸಾರ ವಿವಿಧ ಯೋಗಾಸನಗಳು ಹಾಗೂ ಪ್ರಾಣಾಯಾಮಗಳ ಪ್ರದರ್ಶನ ನಡೆಯಿತು. ಮುಖ್ಯ ಅತಿಥಿಗಳು ಮಾತನಾಡಿ ಯೋಗದ ಮಹತ್ವ, ಭಾರತೀಯ ಸಂಸ್ಕೃತಿಯಲ್ಲಿ ಯೋಗದ ಸ್ಥಾನ ಹಾಗೂ ಆರೋಗ್ಯಕರ ಜೀವನದಲ್ಲಿ ಅದರ ಅಗತ್ಯತೆಯ ಕುರಿತು ಮಾತನಾಡಿದರು. ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೂ ಸಹಕಾರಿಯಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *