Ballari, Feb. 26: Science Day was celebrated herein Rashtrotthana Vidya Kendra – Ballari. Young scientist Sri Hemanth was the chief guest. Smt. Haripriya highlighted the importance of celebrating National Science Day. Students spoke about the significance of the day and explained how science plays an important role in our daily lives and inspires innovation and discovery. Chief guest Sri Hemanth Kumar T. G. addressed the students and gave an inspiring speech, encouraging young minds to be curious and explore the wonders of science through observation and experiments. Pradhanacharya Smt. Saraswati emphasized on the theme of Science Day and the importance of cultivating scientific thinking. Gokulam students performed a dance based on the theme of senses The students of class 1 and 2 performed fancy dress performances depicting blood, scientists, windmills, internal organs, zinc and healthy food, teeth and traffic signs, health environment and scientific concepts. The students of class 3 performed a dance on science song. The chief guests and the Principal inaugurated the festival with a show of “Invisible Ink Magic”.

ಬಳ್ಳಾರಿ, ಫೆ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು – ಬಳ್ಳಾರಿಯಲ್ಲಿ ವಿಜ್ಞಾನ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಯುವವಿಜ್ಞಾನಿ ಶ್ರೀ ಹೇಮಂತ್‌ ಅವರು ಆಗಮಿಸಿದ್ದರು. ಶ್ರೀಮತಿ ಹರಿಪ್ರಿಯಾ ಅವರು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವ ಮಹತ್ವವನ್ನು ಎತ್ತಿ ತೋರಿಸಿದರು. ವಿದ್ಯಾರ್ಥಿಗಳು ದಿನದ ಮಹತ್ವದ ಬಗ್ಗೆ ಮಾತನಾಡಿ ವಿಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ನಾವೀನ್ಯತೆ ಮತ್ತು ಆವಿಷ್ಕಾರವನ್ನು ಪ್ರೇರೇಪಿಸುತ್ತದೆ ಎನ್ನುವುದನ್ನು ವಿವರಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಹೇಮಂತ್ ಕುಮಾರ್ ಟಿ. ಜಿ. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಪೂರ್ತಿದಾಯಕ ಭಾಷಣ ಮಾಡಿ, ಯುವ ಮನಸ್ಸುಗಳು ಕುತೂಹಲದಿಂದ ಇರಲು ಮತ್ತು ವೀಕ್ಷಣೆ ಮತ್ತು ಪ್ರಯೋಗಗಳ ಮೂಲಕ ವಿಜ್ಞಾನದ ಅದ್ಭುತಗಳನ್ನು ಅನ್ವೇಷಿಸಲು ಪ್ರೋತ್ಸಾಹಿಸಿದರು. ಪ್ರಧಾನಾಚಾರ್ಯ ಶ್ರೀಮತಿ ಸರಸ್ವತಿ ಅವರು ವಿಜ್ಞಾನ ದಿನದ ವಿಷಯ ಮತ್ತು ವೈಜ್ಞಾನಿಕ ಚಿಂತನೆಯನ್ನು ಬೆಳೆಸುವ ಮಹತ್ವವನ್ನು ಒತ್ತಿ ಹೇಳಿದರು. ಗೋಕುಲಂ ವಿದ್ಯಾರ್ಥಿಗಳು ಜ್ಞಾನೇಂದ್ರಿಯಗಳ ವಿಷಯಾಧಾರಿತ ನೃತ್ಯವನ್ನು ಪ್ರದರ್ಶಿಸಿದರು 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಫ್ಯಾನ್ಸಿ ಡ್ರೆಸ್‌ ನಲ್ಲಿ ರಕ್ತ, ವಿಜ್ಞಾನಿಗಳು, ವಿಂಡಮಿಲ್‌ ಗಳು, ಆಂತರಿಕ ಅಂಗಗಳು, ಝಂಕ್‌ ಮತ್ತು ಆರೋಗ್ಯಕರ ಆಹಾರ, ಹಲ್ಲು ಮತ್ತು ಸಂಚಾರ ಸಂಕೇತಗಳುನ್ನು ಚಿತ್ರಿಸುವ, ಆರೋಗ್ಯ ಪರಿಸರ ಮತ್ತು ವೈಜ್ಞಾನಿಕ ಪರಿಕಲ್ಪನೆಗಳ ಫ್ಯಾನ್ಸಿ ಡ್ರೆಸ್‌ ಪ್ರದರ್ಶನ ಮಾಡಿದರು. 3ನೇ ತರಗತಿಯ ವಿದ್ಯಾರ್ಥಿಗಳು ವಿಜ್ಞಾನ ಗೀತೆ ನೃತ್ಯವನ್ನು ಪ್ರದರ್ಶಿಸಿದರು. ಮುಖ್ಯ ಅತಿಥಿಗಳು ಮತ್ತು ಪ್ರಧಾನಾಚಾರ್ಯರು “ಇನ್ವಿಸಿಬಲ್ ಇಂಕ್ ಮ್ಯಾಜಿಕ್” ಪ್ರದರ್ಶನದ ಮೂಲಕ ಸೃಜನೋತ್ಸವ ಉದ್ಘಾಟಿಸಿದರು.

Leave a Reply

Your email address will not be published. Required fields are marked *