Ballari, Jan. 18: Dashavatara themed Rashtrotsava was celebrated herein Rashtrotththana Vidya Kendra – Ballari. Sri Na. Dinesh Hegde of Rashtrotththana Parishat and Sri Purushottam Prasad, Vice Chairman of Jindal Steel Limited were graced the program. A brief PowerPoint presentation on RP@60 and RSS 100 years was presented. A magazine was also released. The cultural program started with the blowing of the conch shell. Children gave performances based on Dashavatara.
ಬಳ್ಳಾರಿ, ಜ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ದಶಾವತಾರ ವಿಷಯಾಧಾರಿತ ರಾಷ್ಟ್ರೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ರಾಷ್ಟ್ರೋತ್ಥಾನ ಪರಿಷತ್ನ ಶ್ರೀ ನಾ. ದಿನೇಶ್ ಹೆಗಡೆ ಮತ್ತು ಜಿಂದಾಲ್ ಸ್ಟೀಲ್ ಲಿಮಿಟೆಡ್ ಉಪಾಧ್ಯಕ್ಷರಾದ ಶ್ರೀ ಪುರುಷೋತ್ತಮ್ ಪ್ರಸಾದ್ ಅವರು ಆಗಮಿಸಿದ್ದರು. RP@60 ಮತ್ತು RSS 100 ವರ್ಷಗಳ ಕುರಿತು ಸಂಕ್ಷಿಪ್ತ ಪವರ್ಪಾಯಿಂಟ್ ಅನ್ನು ಪ್ರಸ್ತುತಪಡಿಸಲಾಯಿತು. ಹಾಗೂ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಶಂಖನಾದದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮಕ್ಕಳು ದಶಾವತಾರ ವಿಷಯಾಧಾರಿತ ಪ್ರದರ್ಶನಗಳನ್ನು ನೀಡಿದರು.