Ballari, Jan. 10: Makara Sankranti was celebrated herein Rashtrotthana Vidya Kendra – Ballari.Sri Damodar, member of Gram Vikasa Toli, Karnataka Uttar Prantha, Rashtriya Swayamsevak Sangh, Ballari and Smt. Pankaja, Ballari district executive of Rashtra Sevika Samiti were present as the chief guests.A rangoli competition was organized for the parents and a kite making activity was organized for the children. Students spoke about the importance of the day.Sri Damodar, the guest, said that the prayer song of the Rashtrotthana School was very beautiful. Explaining why Makar Sankranti should be celebrated and what should be done, he explained to the children how to lead a harmonious life. Also said that children should ask more and more questions to the teacher in class.The guests were felicitated by our school principal Smt. Saraswati with a memento. The children showed how farmers work hard to grow paddy during the harvest festival. The children danced to the harvest song sung by the teaching staff. Prizes were distributed to the parents who participated and won the Rangoli competition. A kite made by children was flown in the school premises.
ಬಳ್ಳಾರಿ, ಜ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಮಕರಸಂಕ್ರಾಂತಿಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಶ್ರೀಯುತ ದಾಮೋದರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಗ್ರಾಮ ವಿಕಾಸ ಟೊಳಿ ಸದಸ್ಯರು, ಬಳ್ಳಾರಿ ಮತ್ತು ಶ್ರೀಮತಿ ಪಂಕಜ, ರಾಷ್ಟ್ರ ಸೇವಿಕ ಸಮಿತಿಯ ಬಳ್ಳಾರಿ ಜಿಲ್ಲಾ ಕಾರ್ಯವಾಹಿಕ ಇವರು ಆಗಮಿಸಿದ್ದರು. ಕಾರ್ಯಕ್ರಮದ ನಿಮಿತ್ತ ಪೋಷಕರಿಗೆ ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗೆ ಗಾಳಿಪಟ ತಯಾರಿಸುವ ಚಟುವಟಿಕೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ದಿನದ ಪ್ರಾಮುಖ್ಯತೆಯನ್ನು ಹೇಳಿದರು. ಅತಿಥಿಗಳಾದ ಶ್ರೀ ದಾಮೋದರ್ ಅವರು ರಾಷ್ಟ್ರೋತ್ಥಾನ ಶಾಲೆಯ ಪ್ರಾರ್ಥನೆಯನ್ನು ಶ್ಲಾಘಿಸಿದರು. ಮಕರ ಸಂಕ್ರಾಂತಿ ಏಕೆ ಆಚರಣೆ ಮಾಡಬೇಕು ಏನು ಮಾಡಬೇಕು ಎಂದು ಹೇಳುತ್ತಾ ಸಾಮರಸ್ಯ ಜೀವನವನ್ನು ಹೇಗೆ ನಡೆಸಬೇಕು ಎಂದು ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಿದರು. ತರಗತಿಯಲ್ಲಿ ಗುರುಗಳಿಗೆ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಮಕ್ಕಳು ಕೇಳಬೇಕು ಎಂದರು. ಅತಿಥಿಗಳಿಗೆ ಶಾಲಾ ಪ್ರಧಾನ ಆಚಾರ್ಯರಾದ ಸರಸ್ವತಿ ಅವರು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಮಕ್ಕಳು ಸುಗ್ಗಿಹಬ್ಬದಲ್ಲಿ ರೈತರು ಹೇಗೆ ಕಷ್ಟಪಟ್ಟು ದುಡಿದು ಭತ್ತವನ್ನು ಬೆಳೆಯುತ್ತಾರೆ ಎಂದು ಪಾತ್ರಾಭಿನಯ ಮಾಡಿ ತೋರಿಸಿದರು. ಶಿಕ್ಷಕ ವೃಂದದವರು ಹಾಡಿದ ಸುಗ್ಗಿ ಗೀತೆಗೆ ಮಕ್ಕಳು ನೃತ್ಯವನ್ನು ಮಾಡಿದರು. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಂತಹ ಪೋಷಕರಿಗೆ ಬಹುಮಾನವನ್ನು ವಿತರಿಸಲಾಯಿತು. ಮಕ್ಕಳಿಂದ ತಯಾರಿಸಲ್ಪಟ್ಟ ಗಾಳಿಪಟವನ್ನು ಶಾಲಾ ಆವರಣದಲ್ಲಿ ಹಾರಿಸಲಾಯಿತು.