Ballari, June 9: Hindu Samrajya Diwas was celebrated in Rashtrotthana Vidya Kendra – Ballari. The school principal, Smt. Saraswati, and Ku. Harshavardhan, a fourth-grade student who celebrated his birthday on this day, lit the lamp and then offered flowers to the portrait of Shivaji Maharaj. Shashank, a seventh-grade student, informed that Chhatrapati Shivaji’s coronation day, 09.06.1674, would be celebrated as Hindu Samajwadi Diwas, and he talked about Shivaji’s childhood and the main aspects of his achievements.
ಬಳ್ಳಾರಿ, ಜೂ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಆಚರಿಸಲಾಯಿತು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಸರಸ್ವತಿ ಹಾಗೂ ಈ ದಿನ ಹುಟ್ಟುಹಬ್ಬ ಆಚರಿಸಿಕೊಂಡ ನಾಲ್ಕನೇ ತರಗತಿಯ ವಿದ್ಯಾರ್ಥಿ ಕು. ಹರ್ಷವರ್ಧನ್ ದೀಪ ಪ್ರಜ್ವಲನೆ ಮಾಡಿ ನಂತರ ಶಿವಾಜಿ ಮಹಾರಾಜ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಾರಂಭವಾಯಿತು. ಏಳನೇ ತರಗತಿಯ ಶಶಾಂಕ್ ಎಂಬ ವಿದ್ಯಾರ್ಥಿ ಛತ್ರಪತಿ ಶಿವಾಜಿಯವರ ಪಟ್ಟಾಭಿಷೇಕದ ದಿನವಾದ 09.06.1674 ಈ ದಿನವನ್ನು ಹಿಂದೂ ಸಾಮ್ರಾಜ್ಯ ದಿವಸ್ ಎಂದು ಆಚರಿಸುತ್ತೇವೆ ಎನ್ನುವ ಮಾಹಿತಿಯೊಡನೆ ಶಿವಾಜಿಯವರ ಬಾಲ್ಯ, ಅವರ ಸಾಧನೆಯ ಮುಖ್ಯ ಅಂಶಗಳನ್ನು ತಿಳಿಸಿದನು.