Vivekananda Jayanti Celebration in RVK – Ballari

ಬಳ್ಳಾರಿ, ಜ.10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ವಿವೇಕಾನಂದರಂತೆ ವೇಷ ಧರಿಸಿದ ಕು. ರಿತ್ವಿಕ್ ಆರ್. ಹಿರೇಮಠ್ ಹಾಗೂ ಪ್ರಧಾನಾಚಾರ್ಯ ಶ್ರೀಮತಿ ಸರಸ್ವತಿ ಅವರಿಂದ ದೀಪ ಪ್ರಜ್ವಲನೆ ಮತ್ತು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಕ್ಕಳು ದಿನದ ಮಹತ್ತ್ವದ ಕುರಿತು ಮಾತನಾಡಿದರು. ಹಾಗೂ ಪ್ರಶ್ನೋತ್ತರಗಳ ಮೂಲಕವೂ ವಿವೇಕಾನಂದರ ಕುರಿತು ತಿಳಿಸಿದರು. ಪ್ರಧಾನಾಚಾರ್ಯರು ನೆರೆದ ಪ್ರೇಕ್ಷಕರಿಗೆ ವಿವೇಕಾನಂದರ ಕುರಿತು ತಿಳಿಸಿದರು ಹಾಗೂ ವಿವೇಕಾನಂದರ ಬಾಲ್ಯದಲ್ಲಿ ನಡೆದ ಘಟನೆಯೊಂದನ್ನು ತಿಳಿಸಿದರು. ವಿವೇಕಾನಂದರ ಪ್ರಸಿದ್ಧ ಹೇಳಿಕೆ ‘ಏಳು ಎದ್ದೇಳು’ ಘೋಷಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. 

Leave a Comment

Your email address will not be published. Required fields are marked *

Scroll to Top