Kartika Deepotsava in RVK – Ballari

Ballari, Nov. 16: Karthika Deepotsav was celebrated herein Rashtrotthana Vidya Kendra – Ballari. Gou Puja, Tulasi Puja and Bhajan were performed in the school premises. Retired system leader of Pragati Gramin Bank, the coordinator of RSS Kutumba Prabodhini, Uttar Pratha, Sri W. Nagaraj, graced the program. The guests told the parents to instil respect for our culture in their children. Later, everyone participated in the lamp lighting and puja program. Everyone participated in the Bhajan. The program was concluded with the distribution of prasada.

ಬಳ್ಳಾರಿ, ನ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಗೋ ಪೂಜೆ, ತುಲಸಿ ಪೂಜೆ, ಭಜನೆಯನ್ನು ನೆರವೇರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಗತಿ ಗ್ರಾಮೀಣ ಬ್ಯಾಂಕಿನ ನಿವೃತ್ತ ಸಿಸ್ಟಂ ಲೀಡರ್; ಆರ್.ಎಸ್.ಎಸ್.ನ ಉತ್ತರ ಪ್ರಾಂತದ ಕುಟುಂಬ ಪ್ರಬೋಧಿನಿಯ ಕೋ-ರ್ಡಿನೇಟರ್ ಶ್ರೀ ಡಬ್ಲು. ನಾಗರಾಜ್ ಅವರು ಆಗಮಿಸಿದ್ದರು. ಅವರು ತಮ್ಮ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಮೂಡಿಸುವಂತೆ ಪಾಲಕರಿಗೆ ತಿಳಿಸಿದರು. ಬಳಿಕ ಪ್ರತಿಯೊಬ್ಬರೂ ದೀಪ ಹಚ್ಚುವ ಹಾಗೂ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಜನೆಯಲ್ಲಿ ಎಲ್ಲರೂ ಪಾಲ್ಗೊಂಡರು. ಪ್ರಸಾದ ವಿತರಣೆಯ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Comment

Your email address will not be published. Required fields are marked *

Scroll to Top